ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಹರಿಕೃಷ್ಣ
ಗಾಯನ: ಎಸ್.ಪಿ.ಬಿ

ಪುಣ್ಯಾ ಕಣೆ, ಪುಣ್ಯಾ ಕಣೆ
ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ
ಪ್ರೀತಿ ಮರೆಯೋದು
ಬಿಗುಮಾನವ ಬಿಟ್ಟು ಬಾಳೆಲೆ
ಅಭಿಮಾನಿಸೆ I Love You
ಅನುಮಾನವ ತೊಟ್ಟ ಕೋಮಲೆ
ಸರಿ ತಪ್ಪೋ ತಿಳಿ

ಪುಣ್ಯಾ ಕಣೆ, ಪುಣ್ಯಾ ಕಣೆ
ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ
ಪ್ರೀತಿ ಮರೆಯೋದು

ಏಳು ಹೆಜ್ಜೆ
ಬಾಳ ಸಜ್ಜೆ
ತಾಳು ತಾಳು
ಏಳು ಬೀಳು ಇಲ್ಲಿ ಸಹಜಾ ಕಣೇ!
ಮೂರು ಗಂಟು
ಬಾಳಲಂಟು
ತಾಳಿ ತಾಳಿ
ಬಾಳಬೆಕು
ತಾಳ ತಪ್ಪಾಗದು
ಒಲವೆ ಬದುಕು ತಿಳಿದು ಬದುಕು
ಈ ಮೌನವ ಮುರಿದು ಬಾರೆಲೆ 
ಮಾತಾಡು ಬಾ I Love You
ಒಳಗಣ್ಣನು ತೆಗೆದು ನೋಡೆಲೆ 
ಸರಿ ತಪ್ಪೋ ತಿಳಿ

ನಾನು ನಾನು
ಎಂದೆ ನೀನು
ನಾನು ಎಂಬ ಹಮ್ಮು ಬಿಮ್ಮು ಪ್ರೀತಿಯ ಕಾಯದು
ಪ್ರೀತಿಯಲ್ಲು
ಸೋತು ಗೆಲ್ಲು
ಪ್ರೀತಿ ಬೇಡ.. ಅನ್ನಬೇಡ
ಪ್ರೀತಿಯಾ ಮಾತಿದೂ!
ಅಂಕೆ ಶಂಕೆ ಯಾಕೆ ಮಂಕೆ?
ಒಂದು ಸಾರಿನಿ ತಿರುಗಿ ನೋಡೆಲೆ
ಒಂದಾಗು ಬಾ I Love You
ಒಂದು ಮಾತಿದೆ ಸನಿಹ ಬಾರೆಲೆ
ಸರಿ ತಪ್ಪೋ ತಿಳಿ

ಪುಣ್ಯಾ ಕಣೆ, ಪುಣ್ಯಾ ಕಣೆ
ಪ್ರೀತಿ ಮಾಡೋದು
ಪಾಪಾ ಕಣೆ, ಪಾಪಾ ಕಣೆ
ಪ್ರೀತಿ ಮರೆಯೋದು

Category: ಕನ್ನಡ ಚಿತ್ರಸಾಹಿತ್ಯ
Category: ಜೊತೆ ಜೊತೆಯಲಿ ಚಿತ್ರ
Category: ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ